ಕಾವ್ಯ

ಪ್ರಾರ್ಥನೆ

“ಎಲ್ಲಿ ಮನಕ್ಕೆ ಭೀತಿಯಿರದೋ ಮತ್ತೆಲ್ಲಿ ತಲೆ ಸೆಟೆದು ನಿಲ್ಲುವುದೋ;

ಎಲ್ಲಿ ಜ್ಞಾನವು ಸ್ವತಂತ್ರವೋ;

ಎಲ್ಲಿ ಲೋಕವು ಸಂಕುಚಿತ ಮನೆಗೋಡೆಗಳ ನಡುವೆ ವಿಛ್ಛಿದ್ರವಾಗದೆ

ಉಳಿದಿಹುದೋ;

ಸತ್ಯದಾಳದಿಂದೆಲ್ಲಿ ನುಡಿಗಳು ಹೊರಹೊಮ್ಮಿ ಬರುತ್ತಿಹುದೋ;

ಎಲ್ಲಿ ಪರಿಪೂರ್ಣತೆಯತ್ತ ಶ್ರಮವರಿಯದ ಯತ್ನ ತನ್ನ ಕೈ ಚಾಚಿರುವುದೋ;

ಎಲ್ಲಿ ವಿಚಾರದ ನಿರ್ಮಲ ಪ್ರವಾಹ ಸತ್ತ ಸಂಪ್ರದಾಯಗಳೆಂಬ ನಿರುತ್ಸಾಹ

ಮರುಭೂಮಿಯ ಮರಳಲ್ಲಿ ಹರಿದು ವ್ಯರ್ಥವಾಗದೋ;

ಎಲ್ಲಿ ಮನಸ್ಸು ನಿರಂತರ ವಿಶಾಲ ಭಾವನೆ ಕ್ರಿಯೆಗಳತ್ತ ನಿನ್ನಿಂದ

ಒಯ್ಯಲ್ಪಡುತ್ತಿರುವುದೋ;

ಆ ಸ್ವಾತಂತ್ರ್ಯದ ಸ್ವರ್ಗ ಪಡೆಯಲು ನನ್ನ ದೇಶ ಎಚ್ಚರಗೊಳ್ಳುವಂತೆ ಮಾಡು

ತಂದೆ !”

’ಗೀತಾಂಜಲಿ’ಯಿಂದ

ರವೀಂದ್ರನಾಥ ಟ್ಯಾಗೋರ್