ಗಾದೆಗಳು

ತಾ ಕಳ್ಳ ಪರರನ್ನು ನಂಬ.

ಅವನಿಗೆ ಗತಿ ಇಲ್ಲ ಇವನಿಗೆ ಮತಿ ಇಲ್ಲ

ಮಾತೇ ಮುತ್ತು ಮಾತೇ ಮೃತ್ಯು

ಆನೆಗೆ ಆನೆ ಬಾರ,
ಇರುವೆಗೆ ಇರುವೆ ಬಾರ.

ಹೆಂಗಸಿಗೆ ಹಠ
ಗಂಡಸಿಗೆ ಚಟ,
ಇರಬಾರದು

ಹೊಟ್ಟೆ ತುಂಬಿದ ಮೇಲೆ ಹೋಳಿಗೆ ಹುಳ್ಳ ಹುಳ್ಳಗೆ

ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ

ಕಬ್ಬಿಣದ ಅಂಗಡಿಯಲ್ಲಿ, ನೊಣಕ್ಕೆನು ಕೆಲಸ.

ಸೂಳೇ ಶೃಂಗಾರವಾಗುವಷ್ಟರಲ್ಲಿ ಕುಂಟ ಎಂಟು ಮೈಲಿ ನಡೆದ

ಅರಮನೆ ಮುನಿದರೆ ಇರಬಹುದು
ನೆರೆಮನೆ ಮುನಿದರೆ ಇರಲಾಗದು

ಕುಂಟಂಗೆ ಎಂಟು ಚೇಷ್ಟೆ ಆದ್ರೆ ಕುರುಡರಿಗೆ ನಾನಾ ಚೇಷ್ಟೆ

ದೃಷ್ಟಿ ಬದಲಾಯಿಸು ದೃಶ್ಯ ಬದಲಾದೀತು

ಗಾದೆ :ಆಳಾಗಿ ದುಡಿ, ಅರಸನಾಗಿ ಉಣ್ಣು.

ಮನೆ ಮನೆ ಮುದ್ದೆ
ಮಾರಿಗುಡೀಲಿ ನಿದ್ದೆ